ಎಲ್ಲಾ
ಫ್ರೆಂಡ್ಸ್ ಹತ್ತಿರಾನೂ ಬೈಕ್ ಇದೆ. ಬರ್ತಡೇ
ಮುಂಚೆ ನನಗೆ ಬೈಕ್ ಕೊಡಿಸಲೇ ಬೇಕು ಎಂದು ಹಠ ಹಿಡಿದು ಬೈಕ್ ತೆಗೆಸಿಕೊಂಡಿದ್ದೆ. ನಮ್ಮದು ಮಧ್ಯಮ
ವರ್ಗದ ಕುಟುಂಬ. ಅಪ್ಪ ಲೋನ್ ಮಾಡಿ ಬೈಕ್ ಕೊಡಿಸಿದ್ದರು. ಕಾಲೇಜಿಗೆ ರಜೆ ಇದ್ದ ಕಾರಣ ನಾಲ್ಕು
ಬೈಕ್ ಗಳಲ್ಲಿ ಎಂಟು ಜನ ಜಾಲಿ ರೈಡ್ ಹೊರಟಿದ್ದೆವು. ಫಾಸ್ಟ್ ಆಗಿ ಬರುತ್ತಿದ್ದುದನ್ನು ನೋಡಿ
ಪಿ.ಸಿ. ನಿಲ್ಲಿಸುವಂತೆ ಸೂಚಿಸಿದ. ಎರಡು ಬೈಕ್ ಗಳಲ್ಲಿ ಇದ್ದವರು ತಪ್ಪಿಸಿಕೊಂಡು ಮುಂದಕ್ಕೆ
ಹೊರಟು ಹೋದರು. ನಾನು ಮತ್ತು ಇನ್ನೊಬ್ಬ ಫ್ರೆಂಡ್ ಸಿಕ್ಕಿ ಹಾಕಿಕೊಂಡೆವು. ಪಿ.ಸಿ. ಡಾಕ್ಯುಮೆಂಟ್
ತೋರಿಸಲು ಹೇಳಿದ. ಎಲ್ಲಾ ಕರೆಕ್ಟ್ ಆಗಿ ಇದ್ದುದರಿಂದ ಏನೂ ಮಾಡಲಾಗದೆ ಕೀ ಕಿತ್ತುಕೊಂಡ. ನಾವು ಕೀ
ಯಾಕೆ ಕಿತ್ತುಕೊಳ್ಳುತ್ತೀರಿ ಎಂದು ಗಲಾಟೆ ಮಾಡಲು ಪ್ರಾರಂಭಿಸಿದೆವು. ಮುಂದೆ ಹೋಗಿದ್ದ ಫ್ರೆಂಡ್ಸ್
ಕೂಡಾ ಬೈಕ್ ನಿಲ್ಲಿಸಿ ಬಂದು ನಮ್ಮ ಜೊತೆ ಸೇರಿಕೊಂಡರು. ಎರಡು ಬೈಕ್ ಗಳನ್ನು ಸ್ಟೇಷನ್ ಗೆ
ತಗೊಂಡು ಹೋದರು. ನಾಳೆ ಕೋರ್ಟಿಗೆ ಬನ್ನಿ ಎಂದು ಹೇಳಿ ನಮ್ಮನ್ನು ಕಳುಹಿಸಿಬಿಟ್ಟರು. ಬಸ್ ಹತ್ತಿ
ಕುಳಿತವನೇ ಯೋಚಿಸತೊಡಗಿದೆ. ಅಪ್ಪ ಎಷ್ಟು ಕಷ್ಟಪಟ್ಟು ಬೈಕ್ ಕೊಡಿಸಿದ್ರು. ನಿಧಾನವಾಗಿ ಓಡಿಸು,
ಹೆಲ್ಮೆಟ್ ಹಾಕ್ಕೊಂಡು ಹೋಗು. ಲೈಸೆನ್ಸ್ ಗಾಡಿಯಲ್ಲಿ ಇಟ್ಟುಕೋ ಅಂತ ಒಂದಿನಾನೂ ಬಿಡದೆ
ಹೇಳುತ್ತಿದ್ದರೂ ನಾನು ಕಿವಿ ಮೇಲೆ ಹಾಕ್ಕೊಳ್ಳುತ್ತಿರಲಿಲ್ಲ. ಮನೆಗೆ ಬಂದ ತಕ್ಷಣ ಅಳು ತಡೆಯಲಾಗಲಿಲ್ಲ. ಜೋರಾಗಿ
ಅತ್ತುಬಿಟ್ಟೆ. ಅಪ್ಪ ಅಮ್ಮ ಇಬ್ಬರೂ ಗಾಬರಿಯಾಗಿ ಮೊದ್ಲು ಅಳೋದು ನಿಲ್ಸು ಏನಾಯ್ತು ಅಂತ ಹೇಳು ಗಾಡಿ
ಎಲ್ಲಿ ಅಂತ ಕೇಳುತ್ತಿದ್ದರು. ಅಳುತ್ತಲೇ ವಿಷಯ ತಿಳಿಸಿದೆ. ಎಲ್ಲಾ ಸಮಸ್ಯೆಗೂ ಒಂದು ಪರಿಹಾರ
ಇರುತ್ತೆ. ನಾಳೆ ಹೋಗಿ ನೋಡೋಣ ಈಗ ಊಟ ಮಾಡಿ ಮಲಕ್ಕೋ ಎಂದು ಸಮಾಧಾನಪಡಿಸಿದ್ರು.
ಮರುದಿನ ಅಪ್ಪನ ಜೊತೆ ಸ್ಟೇಷನ್ ಗೆ ಹೋದೆ. ಪಿ.ಸಿ. ಅಪ್ಪನಲ್ಲಿ ಹುಡುಗ್ರಿಗೆ ಸ್ವಲ್ಪ ಭಯ ಇರ್ಬೇಕು
ಸರ್ ನಮ್ಗೇ ರೋಪ್ ಹಾಕ್ತಾರೆ. ರಿಕ್ವೆಸ್ಟ್ ಮಾಡಿದ್ರೆ ಬಿಡ್ತಿದ್ದೆವು. ಅದ್ಕೆ ಸ್ವಲ್ಪ ಹೆದರಿಸ್ಲಿಕ್ಕೆ
ಹೀಗೆ ಮಾಡಿದೆವು. ಈಗ ಕೇಸ್ ಫೈಲ್ ಮಾಡಿ ಆಗಿದೆ. ಏನೂ ಮಾಡಲಿಕ್ಕೆ ಆಗೋದಿಲ್ಲ. ನೀವು ಒಂದು ಕೆಲ್ಸ
ಮಾಡಿ ನನ್ಗೆ ಗೊತ್ತಿರೋ ಲಾಯರ್ ಒಬ್ರು ಇದ್ದಾರೆ ಅವರ ನಂಬರ್ ಕೋಡ್ತೀನಿ ಅವರನ್ನ ಮೀಟ್ ಮಾಡಿ ಅಂತ
ಹೇಳಿ ನಂಬರ್ ಕೊಟ್ರು. ಲಾಯರ್ ಗೆ ಇದೆಲ್ಲ ಮಾಮೂಲು. ಕೋರ್ಟಿಗೆ ಕರ್ಕೊಂಡು ಹೋದ್ರು. ಹೋಗುವಾಗ
ಒಂದಷ್ಟು ಬುದ್ಧಿಮಾತು ಹೇಳಿದ್ರು. ಕೋರ್ಟಲ್ಲಿ ನಮ್ಮನ್ನು ಕುಳಿತುಕೊಳ್ಳೋದಕ್ಕೆ ಹೇಳಿ ಒಳಗೆ
ಹೋಗಿ ಏನೋ ಮಾತಾಡಿದ್ರು. ಮತ್ತೆ ಬಂದು ಎರಡು ಸಾವಿರ ಕೊಡಲು ಹೇಳಿದ್ರು. ಅಪ್ಪ ಮಾತಾಡದೆ ಎರಡು
ಸಾವಿರ ಕೊಟ್ರು. ಮಧ್ಯಾಹ್ನ ಬಂದು ಗಾಡಿ ತಗೊಂಡು ಹೋಗಲು ಹೇಳಿದ್ರು. ಈ ಸಲ ಬರ್ತಡೇ ಪಾರ್ಟಿಗೆ ಅಪ್ಪನ ಹತ್ರ ದುಡ್ಡು ಕೇಳಬಾರದು ಅಂತ
ನಿರ್ಣಯ ಮಾಡಿಕೊಂಡೆ. ಲಾಯರ್ ಪಿ.ಸಿ.ಗೆ ಪೋನ್
ನಲ್ಲಿ ಹೇಳುತ್ತಿದ್ದರು. ನಾಳೆಯಿಂದ ನೋಡ್ಕೊಂಡು ಸ್ವಲ್ಪ ಜೋರಾಗಿರೋ ಪಾರ್ಟಿಗಳ್ನ ಹಿಡ್ದು ಕಳುಹಿಸಪ್ಪ.
*****
No comments:
Post a Comment