ಅಂದು
ಮೀನಾಕುಮಾರಿ ಯವರ ಮನೆಯಲ್ಲಿ ಸಂತಸ ಸಂಭ್ರಮ ತುಂಬಿ ತುಳುಕಾಡುತ್ತಿತ್ತು. ಮನೆ ತುಂಬಾ ನೆಂಟರು.
ಮುಂದಿನ ವಾರದಲ್ಲಿ ಅವರ ತಮ್ಮನ ಮಗನ ಮದುವೆ. ಮದುವೆಗೆಂದು ಅಮೇರಿಕಾದಿಂದ ಅವರ ಮನೆಗೆ ಮಗಳು,
ಅಳಿಯ ಹಾಗೂ ಮೊಮ್ಮಗ ಬರುವವರಿದ್ದರು. ಎಲ್ಲರಿಗೂ ಕುತೂಹಲ ಹೊಸ ಅಳಿಯನನ್ನು ನೋಡಲು. ಎಲ್ಲರ ಮನೆಗೆ
ಮಗಳು ಅಳಿಯ ಬರುತ್ತಾರಪ್ಪ. ಇದರಲ್ಲಿ ಏನು ವಿಶೇಷ ಅಂದ್ಕೋಬೇಡಿ. ವಿಶೇಷ ಇದೆ. ಎಲ್ಲರಂತಲ್ಲ ಅವರ
ಅಳಿಯ. ಅವನು ಬಿಳಿ ಅಳಿಯ.
ಒಬ್ಬಳೇ
ಮಗಳು. ಬೇಕಾದಷ್ಟು ಆಸ್ತಿ ಇತ್ತು. ಅಮೇರಿಕಾದಲ್ಲಿರುವ ಹುಡುಗನನ್ನು ನೋಡಿ ಬಹಳ ವಿಜ್ರಂಭಣೆಯಿಂದ
ಮಗಳಿಗೆ ಮದುವೆ ಮಾಡಿ ಕೊಟ್ಟಿದ್ದರು. ಮಗಳು ಬಿಇ ಓದಿದ್ದಳು. ಅವಳೂ ಕೂಡಾ ಮದುವೆ ನಂತರ ಅಮೇರಿಕಾದಲ್ಲಿ
ಕೆಲಸಕ್ಕೆ ಸೇರಿದ್ದಳು. ಆದರೆ ಅವರ ದಾಂಪತ್ಯ ಜೀವನ ಬಹಳ ದಿನ ಉಳಿಯಲಿಲ್ಲ. ಅವಳಿಗೆ ದಾಂಪತ್ಯ
ಜೀವನದ ಸುಖವನ್ನು ನೀಡಲು ಅವನು ಸಂಪೂರ್ಣ ವಿಫಲನಾಗಿದ್ದ. ಅವನು ನಪುಂಸಕನಾಗಿದ್ದ. ದಿನಗಳೆದಂತೆ
ಅವಳಿಗೆ ಅವನ ಜೊತೆಗಿನ ಜೀವನ ಅಸಹನೀಯವಾಗತೊಡಗಿತ್ತು. ಅವನ ಗುಟ್ಟು ಅವಳಿಗೆ
ಗೊತ್ತಾಗುತ್ತಿದ್ದಂತೆ ಅವನು ಕ್ರೂರಿಯಾಗತೊಡಗಿದ್ದ. ಯವಾಗಲೂ ಅವಳ ಮೇಲೆ ಸಂಶಯಪಟ್ಟು
ಹಿಂಸಿಸತೊಡಗಿದ. ಹೇಗಪ್ಪಾ ಇಲ್ಲಿಂದ ತಪ್ಪಿಸಿಕೊಂಡು ಹೋಗೋದು ಅಂತ ಅವಳು ಚಡಪಡಿಸುತ್ತಿದ್ದಳು.
ಅವನು
ಯೋಚಿಸಿದ. ತನಗಿನ್ನೂ ಮದುವೆಯಾಗಿಲ್ಲ. ಅವಳೀಗ ಅಮೇರಿಕಾದ ಪ್ರಜೆ. ಅವಳಿಗೆ ಅವಳ
ಗಂಡನಿಂದ ಡೈವೋರ್ಸ್ ಪಡೆದುಕೊಳ್ಳುವುದು ಅಷ್ಟೇನೂ ಕಷ್ಟವಾಗಲಾರದು. ತಾನು ಅವಳನ್ನು ಮದುವೆಯಾಗಲು
ಪ್ರಪೋಸ್ ಮಾಡಿದರೆ ಅವಳು ಒಪ್ಪಬಹುದೇ ಎಂದು ಯೋಚಿಸತೊಡಗಿದ. ಮಾರನೆ ದಿನ ಈ ವಿಷಯವನ್ನು ಅವಳಲ್ಲಿ
ಬಹಿರಂಗಪಡಿಸಿದ. ಮೊದಲು ಅವಳಿಗೆ ಈ ಶಾಕ್ ನಿಂದ ಹೊರಬರಲು ಸ್ವಲ್ಪ ಸಮಯ ಹಿಡಿಸಿತು. ಆಮೇಲೆ ಅವಳೂ
ಯೋಚಿಸತೊಡಗಿದಳು. ತನಗೂ ಆಸೆ ಆಕಾಂಕ್ಷೆಗಳಿವೆ. ಷಂಡ ಗಂಡನೊಂದಿಗೆ ಸಂಸಾರ ಮಾಡುವುದಂತೂ
ಸಾಧ್ಯವಿಲ್ಲ. ಇವನಿಂದ ಬಿಡುಗಡೆಗೆ ದೇವರು ದಾರಿ ತೋರಿಸಿ ಕೊಟ್ಟಿದ್ದಾನೆ ಈ ಅವಕಾಶಾನಾ ಬಿಡಬಾರದು
ಎಂದು ಯೋಚಿಸಿ ಮೊದಲು ಭಾರತದಲ್ಲಿರುವ ಅಪ್ಪ ಅಮ್ಮನಿಗೆ ತಿಳಿಸಿ ಅವರ ಅಭಿಪ್ರಾಯ ಪಡೆಯಬೇಕು ಎಂದು
ಯೋಚಿಸಿದವಳೇ ಅಮ್ಮನಿಗೆ ಫೋನ್ ಮಾಡಿದಳು. ಅಮ್ಮನೂ ವಿಷಯ ತಿಳಿದು ಶಾಕ್ ನಿಂದ ಈಚೆ ಬರಲಾರದಾದಳು.
ಬಿಳಿ ಹೆಂಡತಿಯನ್ನು ಕಟ್ಟಿಕೊಳ್ಳೋದು ಕೇಳಿದ್ದೀನಿ ಆದ್ರೆ ಮಗಳು ಬಿಳಿ ಗಂಡನನ್ನು
ಕಟ್ಟಿಕೊಳ್ಳುತ್ತೇನೆ ಅಂತ ಹೇಳುತ್ತಿದ್ದಾಳಲ್ಲ. ಕೊನೆಗೆ
ಅಪ್ಪ ಸಮಜಾಯಿಷಿ ನೀಡಿ ಅಮ್ಮನಿಗೆ ಸಮಾಧಾನ ಮಾಡಿ ಮದುವೆಗೆ ಒಪ್ಪಿಗೆ ನೀಡಿದರು.
ಗಂಡನಿಂದ
ಡೈವೋರ್ಸ್ ಪಡೆದ ಅವಳಿಗೆ ಅಮೇರಿಕಾ ಹುಡುಗನ ಜೊತೆ ಅವನ ಆಸೆಯಂತೆ ಹಿಂದೂ ಸಂಪ್ರದಾಯ ಪ್ರಕಾರ
ಮದುವೆ ಮಾಡಿಕೊಡಲಾಯಿತು. ಅಪ್ಪ ಅಮ್ಮ ಅಮೇರಿಕಾಕ್ಕೆ ಹೋಗಿ ಧಾರೆ ಎರೆದು ಕೊಟ್ಟರು. ಅಮೇರಿಕಾ ಗಂಡನಿಂದ ಒಂದು ಗಂಡುಮಗುವನ್ನು ಪಡೆದಳು. ಅಮೇರಿಕಾದ ಬಿಳಿ
ಗಂಡನೊಂದಿಗೆ ಆ ಮಗುವನ್ನು ಕರೆದುಕೊಂಡು ಅವಳು ಮಾವನ ಮಗನ ಮದುವೆಗೆಂದು ಭಾರತಕ್ಕೆ ಅಮ್ಮನ ಮನೆಗೆ ಬರುವವಳಿದ್ದಳು. ಅದಕ್ಕೆ
ಆ ಮನೆಯಲ್ಲಿ ಅಂದು ಅಷ್ಟು ಸಂತಸ, ಸಂಭ್ರಮ. ಆರತಿ ಹಿಡಿದು ಬಿಳಿ ಅಳಿಯನನ್ನು ಹಾಗೂ ಮಗುವನ್ನು
ಸ್ವಾಗತಿಸಲು ಎಲ್ಲರೂ ತುದಿಗಾಲಲ್ಲಿ ಕಾಯುತ್ತಿದ್ದರು.
*****