ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಕೆಲಸಕ್ಕೆ
ಹೋಗದೆ ಮೂರು ಹೊತ್ತೂ ಮನೇಲೇ ಬಿದ್ದಿರುತ್ತಿದ್ದ ಅಪ್ಪ. ಅಮ್ಮ ಕಸ ಮುಸುರೆ ತಿಕ್ಕಿ ನಮಗೆ ಇಷ್ಟು ಮಾತ್ರ ವಿದ್ಯೆ
ಕೊಡಿಸಿದ್ದಳು. ನಾವು ನಾಲ್ಕು ಜನ ಮಕ್ಕಳು. ನಾನೇ ಹಿರಿಯವಳು. ಪಿ.ಯು.ಸಿ. ಓದಿದವಳೇ ಸಣ್ಣ
ಕಂಪೆನಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದೆ. ನನ್ನ ಜೊತೇಲಿ
ಕೆಲಸಕ್ಕೆ ಸೇರಿಕೊಂಡವಳೇ ಶೈಲಾ. ಡಾಟಾ ಎಂಟ್ರಿ ಆಪರೇಟರ್ ಆಗಿ ಇಬ್ಬರೂ ಒಟ್ಟಿಗೇ ಕೆಲಸಕ್ಕೆ
ಸೇರಿದ್ದೆವು. ಆವಾಗಿನಿಂದ ನಾವು ಜೀವದ ಗೆಳತಿಯರಾಗಿದ್ದೆವು. ಒಂದೇ ದಿನ ಕೆಲಸಕ್ಕೆ ಸೇರಿಕೊಂಡಿದ್ದರಿಂದ
ಒಬ್ಬರನ್ನೊಬ್ಬರು ಬಿಟ್ಟಿರುತ್ತಿರಲಿಲ್ಲ. ಕಾಫೀ, ಊಟ ಎಲ್ಲಾ ಜೊತೇಲೇ ಆಗುತ್ತಿತ್ತು. ಸಾಲರಿ
ಡ್ರಾ ಮಾಡಲು ಎಟಿಎಂ ಕಾರ್ಡ್ ಕೊಟ್ಟಿದ್ದರು. ಅದನ್ನು ತಗೊಳ್ಳಲೂ ಜೊತೇಲೆ ಹೋಗುತ್ತಿದ್ದೆವು.
ಪಾಸ್ ಬುಕ್ ಎಂಟ್ರಿ ಮಾಡಲು ಹೋದಾಗ ಅವಳಿಗೆ ಗೊತ್ತಾಗಿ ಹೋಯಿತು. ತಲೆಯಲ್ಲಿ ಹುಳು
ಬಿಟ್ಟಂಗಾಯ್ತು. ಯಾರು ತೆಗೆದಿರಬಹುದು ಅಂತ ಒಂದೇ
ಸಮನೆ ಯೋಚನೆ ಮಾಡುತ್ತಿದ್ದಳು. ಅವಳಿಗೆ ಬಾಸ್ ತುಂಬಾ ಕ್ಲೋಸ್ ಆಗಿದ್ದರು. ಅವರಲ್ಲಿ ಎಲ್ಲಾ
ವಿಷಯವನ್ನೂ ತಿಳಿಸಿದಳು. ಅವರು ಎನ್ ಕ್ವಯರಿ ಮಾಡಿದರು. ನಾನು ಸಿಕ್ಕಿ ಬಿದ್ದಿದ್ದೆ. ಕೊನೆಗೆ
ಮನೆಯ ಬಡತನ ಅಮ್ಮನ ಅನಾರೋಗ್ಯದ ವಿಚಾರವೆಲ್ಲಾ ಹೇಳಿ ತಪ್ಪು ಒಪ್ಪಿಕೊಂಡು ಬಿಟ್ಟೆ. ಇದೊಂದು ಸಲ
ಕ್ಷಮಿಸಿ ಇನ್ನೆಂದೂ ಇಂತಹ ತಪ್ಪು ಮಾಡೋದಿಲ್ಲ ಅಂತ ಗೋಗರೆದೆ. ನಿನಗೆ ಕಷ್ಟವಿದ್ದರೆ ನಮಗೆ ಹೇಳಿದಿದ್ರೆ
ಸಹಾಯ ಮಾಡುತ್ತಿದ್ದೆವು. ಇಂತಹ ಕೆಲಸ ಮಾಡಿದ್ದು ತಪ್ಪು ಎಂದು ಮುಲಾಜಿಲ್ಲದೆ ಮನೆಗೆ ಕಳುಹಿಸಿಬಿಟ್ರು.
ಅದೊಂದು ಕಪ್ಪು ಚುಕ್ಕೆ ನನ್ನ ಜೀವನದಲ್ಲಿ ಸೇರ್ಕೊಂಡು ಬಿಡ್ತು. ಈಗಿನ ಕಾಂಪಿಟೀಷನ್ ಯುಗದಲ್ಲಿ
ಎಲ್ಲಿ ಹೋದರೂ ನನ್ನ ಅರ್ಹತೆಗೆ ಯಾವ ಕೆಲಸವೂ ಸಿಗಲಿಲ್ಲ. ಎರಡು ವರ್ಷದ ಅನುಭವ ಕೂಡಾ ಕೆಲಸಕ್ಕೆ
ಬರಲಿಲ್ಲ. ಮುಂದಾಲೋಚನೆ ಇಲ್ಲದೆ ಮಾಡಿದ ತಪ್ಪಿನಿಂದ ಇಂದಿಗೂ ಯಾವ ಕೆಲಸವೂ ಇಲ್ಲದೆ ಕೊರಗುತ್ತಿದ್ದೇನೆ.
*****
No comments:
Post a Comment