ಚಪ್ಪರ ಮುಹೂರ್ತ
ದೇವರಲ್ಲಿ ಪ್ರಾರ್ಥನೆ
5 ಬಣ್ಣಗಳು ತೆಂಗಿನಕಾಯಿ, ಬಾಳೆಹಣ್ಣು, ಊದುಬತ್ತಿ,ಲೋಬಾನ, ವೀಳ್ಯದೆಲೆ, ಅಡಿಕೆ ಇತ್ಯಾದಿಗಳೊಂದಿಗೆ ಹುಡುಗಿಯನ್ನು ಚಪ್ಪರ ಮುಹೂರ್ತ ಮಾಡುವ ಜಾಗಕ್ಕೆ ಕರೆದುಕೊಂಡು ಬರುವುದು
ನೈರುತ್ಯ ದಿಕ್ಕಿನಲ್ಲಿ (ಕನ್ನಿ ಮೂಲೆ) ಹಾಲೆ ಗೆಲ್ಲು ಅಥವಾ ಅತ್ತಿ ಗೆಲ್ಲನ್ನು
ನೆಡಬೇಕು
ಹುಡುಗಿಯ
ತಾಯಿ ಹಾಲೆಕಂಬಕ್ಕೆ ಗಂಧ, ಅರಿಶಿನ ಕುಂಕುಮ ಹಚ್ಚಿ, ಹೂವು ಹಾಕಿ ಊದುಬತ್ತಿ ಹಚ್ಚಬೇಕು
ಜೇಡಿ
ಅಥವಾ ಬಿಳಿಬಣ್ಣದಿಂದ ಹಾಲೆ ಗೆಲ್ಲಿಗೆ 5 ಗೆರೆ ಎಳೆಯಬೇಕು. ಲೋಬಾನ ಹಾಕಬೇಕು. ತೆಂಗಿನ
ಕಾಯಿಯನ್ನು ಒಡೆದು ನೀರನ್ನು ಹಾಲೆ ಗೆಲ್ಲಿಗೆ ಹಾಕಬೇಕು. ತೆಂಗಿನ ಕಾಯಿಯನ್ನು ಹಾಲೆಕಂಬದ
ಬುಡದಲ್ಲಿ ಇಡಬೇಕು.
ಸಿದ್ಧಪಡಿಸಿಟ್ಟ
5 ಮೇಲ್ನೀರಿನ ಕಳಸಗಳಲ್ಲಿ ಒಂದನ್ನು ಎತ್ತಿ ಎಡ ಅಂಗೈಲಿಟ್ಟು ಬಲಕೈಯಲ್ಲಿ ಒಂದು ಮಣ್ಣಿನ
ಉಂಡೆಯನ್ನು ಹಿಡಿದು ಎರಡನ್ನೂ ಹುಡುಗಿಗೆ ಮುಟ್ಟಿಸಿ ಮಣ್ಣಿನ ಉಂಡೆಯನ್ನು ಕಂಬದ ಬುಡಕ್ಕೆ ಹಾಕಿ
ಲೋಟದಲ್ಲಿದ್ದ ಬಾಳೆ ಹೂವಿಂದ ಒಂದನ್ನು ಹುಡುಗಿಯ ತಲೆಗೆ ಮುಡಿಸಿ ಕೈಯಲ್ಲಿದ್ದ ಕಳಸವನ್ನು
ಬಲಕೈಯಿಂದ ಮುಚ್ಚಿ ಕಲಶ ಹಿಡಿಯುವವರಿಗೆ ಮೊದಲು ನೀಡಬೇಕು. ಉಳಿದ 4 ಮೇಲ್ನೀರಿನ ಕಳಸಗಳನ್ನೂ ಇದೇ
ರೀತಿ ಮಾಡಿ ಮುತ್ತೈದೆಯರಿಗೆ ನೀಡಬೇಕು. ಅದರಲ್ಲಿರುವ ಬಾಳೆ ಹೂವನ್ನು ಅವರು ಮುಡಿಯಬೇಕು.
ಗಂಧಾಕ್ಷತೆಯನ್ನು ಹುಡುಗಿಯ ಹಣೆಗೆ ಹಚ್ಚಬೇಕು. ಹುಡುಗಿಯನ್ನು ಒಳಗೆ ಕರೆದುಕೊಂಡು ಹೋಗುವಾಗ 5 ಬಣ್ಣಗಳಿಂದ ಬಾಗಿಲಿಗೆ ಒಂದೊಂದು ಗೆರೆ ಎಳೆಯಬೇಕು.
ಗಂಧಾಕ್ಷತೆಯನ್ನು ಹುಡುಗಿಯ ಹಣೆಗೆ ಹಚ್ಚಬೇಕು. ಹುಡುಗಿಯನ್ನು ಒಳಗೆ ಕರೆದುಕೊಂಡು ಹೋಗುವಾಗ 5 ಬಣ್ಣಗಳಿಂದ ಬಾಗಿಲಿಗೆ ಒಂದೊಂದು ಗೆರೆ ಎಳೆಯಬೇಕು.
ಕೋಣೆಯ ಪೂರ್ವದಿಕ್ಕಿನ ಗೋಡೆಗೆ
ಬಾಸಿಂಗ ತೊಂಡ್ಲ ಕಾಲುದೀಪ ಕಲಶ ಮತ್ತು ಸೂರ್ಯ ಚಂದ್ರ ಇವುಗಳನ್ನು ಬರೆಯಬೇಕು. ನಂತರ ಎಲ್ಲರಿಗೂ
ಬಳೆ, ಹೂವು, ಅರಿಶಿನ ಕುಂಕುಮ ನೀಡಬೇಕು.
ಉದ್ದಿನ ಮುಹೂರ್ತ:
ರಂಗೋಲಿ ಮಾವಿನ ಎಲೆ ಹೂವುಗಳಿಂದ ಅಲಂಕರಿಸಿದ ಬೀಸುವ ಕಲ್ಲು, 5 ಲೋಟ ಇಡಿ ಉದ್ದು ರೆಡಿಮಾಡಿಕೊಳ್ಳಬೇಕು.ಹುಡುಗಿಯನ್ನು ದೀಪ ಕಲಶ ಸಹಿತ ಕರೆದುಕೊಂಡು ಬರಬೇಕು
ಹುಡುಗಿಯ ತಾಯಿ ಬೊಗಸೆಯಲ್ಲಿ ಉದ್ದನ್ನು ತಗೊಂಡು ಹುಡುಗಿಗೆ ಮುಟ್ಟಿಸಿ ಬೀಸುವ ಕಲ್ಲಿಗೆ ಹಾಕಬೇಕು ಹೀಗೆ 5ಸಲ ಮಾಡಬೇಕು. ಬಳಿಕ ಇತರ ಮುತ್ತೈದೆಯರೂ ಇದೇ ರೀತಿ ಮಾಡಬೇಕು.
ಅರಿಶಿನೆಣ್ಣೆ:
ನಂತರ ಸೇಸೆ ಹಾಕಬೇಕು .
ಕಳಸದವರು ಅರಶಿನೆಣ್ಣೆ ಮಾಡಿ ಸೇಸೆ ಹಾಕಬೇಕು
No comments:
Post a Comment